top of page

ಜನತಾ ಶಿಕ್ಷಣ ಸಮಿತಿ

ಕೆ. ಹೆಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ

ವಿಧ್ಯಾಗಿರಿ, ಧಾರವಾಡ  - 580 004

ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ( ಸರ್ಕಾರಿ )

ಹಾಗು

ಘಟಕ 2 ( ಸ್ವ ಸಹಾಯ ಆರ್ಥಿಕ )

2019 - 2020 ನೇ ಸಾಲಿನ

ವಾರ್ಷಿಕ ದೈನಂದಿನ ಚಟುವಟಿಕೆ ವರದಿ

 

01 June, Saturday 2019

10:30 am

ಇಂದು ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪ್ರಾಚಾರ್ಯ ವಸಂತ ದೇಸಾಯಿ ಅವರು ಹಾಗೂ ಸಂಸ್ಥೆಯ ಸಂಯೋಜನಾಧಿಕಾರಿ ಗಳಂತ ಶ್ರೀ ವ್ಹಿ ಕೆ. ಭರಣಿ ಅವರು ಸಂಸ್ಥೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ವಸಂತ್ ದೇಸಾಯಿ ಅವರು ವಿಶ್ವ ಪರಿಸರ ದಿನಾಚರಣೆ ಎಲ್ಲರೂ ಆಚರಿಸುವ ದಿನಾಚರಣೆ ಪ್ರಕೃತಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ದಿನ ಪರಿಸರ ಇದ್ದರೆ ಮಾತ್ರ ನಮ್ಮ ಬದುಕು ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳ ಆವರಣದಲ್ಲಿ ಹಾಗೂ ಸಂಸ್ಥೆಗಳಲ್ಲಿ ಸಸಿಗಳನ್ನು ಗಿಡಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಕಾಪಾಡಬೇಕೆಂದು ಕರೆನೀಡಿದರು 

 

21 June, Friday 2019

10:00 am

ಇಂದು ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ನೇ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಶ್ರೀ ವೀರಯ್ಯ ಗಡ್ಡದ ಮಠ ಅವರು ಹಾಗೂ ಪ್ರಸನ್ನ ಬಡಿಗೇರ್ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಸೇರಿದಂತೆ ಸಂಸ್ಥೆಯ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗದ ಮೂಲಕ ದೇಹವನ್ನು ನಾವು ಕಾಪಾಡಿಕೊಳ್ಳಬೇಕು ಮೂಲಕ ಆತ್ಮ ಸ್ಥಿತಿಗಳನ್ನು ವಸ್ತುವನ್ನಾಗಿಸಿ ಕೊಳ್ಳಬೇಕೆಂದು ಕರೆನೀಡಿದರು ನಂತರ ಪ್ರಸನ್ನ ಬಡಿಗೇರ್ ಅವರ ಮೂಲಕ ವಿವಿಧ ಯೋಗಾಸನಗಳನ್ನು ಪ್ರಾರ್ಥನೆಯಾಗಿ ತೋರಿಸಿ ಮತ್ತು ಎಲ್ಲರಿಗೂ ಯೋಗಾಭ್ಯಾಸ ಗಳನ್ನು ಮಾಡಿಸಿದರು.. ಸಮಾರಂಭದಲ್ಲಿ ಸಂಸ್ಥೆಯ ಪ್ರಾಚಾರ್ಯ ಹೊಸ ದೇಸಾಯಿ ಹಾಗೂ ಸಂಯೋಜಕರಾದ ಶ್ರೀ ವಿಕೆ ಭರಣಿ ಅವರು ಉಪಸ್ಥಿತರಿದ್ದರು ಪ್ರಾರ್ಥನೆ ಗೀತೆಯನ್ನು ಕುಮಾರಿ ಅನಘಾ ಹಿರೇಮಠ ಹಾಗೂ ಕಾರ್ಯಕ್ರಮದ ಸ್ವಾಗತವನ್ನು ವಸಂತ್ ಅವರು ನೆರವೇರಿಸಿದರು. ವಂದನಾರ್ಪಣೆಯನ್ನು ಕುಮಾರ್ ಕಿರಣ್ ಲಮಾಣಿ ನೆರವೇರಿಸಿದರು ಕಾರ್ಯಕ್ರಮದ ಸಂಯೋಜನೆಯನ್ನು ಕುಮಾರಿ ಅಕ್ಷತಾ ಚಬ್ಬಿ ನಡೆಸಿದರು.

 

 

12 July, Friday 2019

10:44 pm

ಇಂದು ಪ್ರಥಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಪರಿಸರ ತಜ್ಞ ಮುಕುಂದ ಮೈಗೂರ ಅವರು ಆಗಮಿಸಿದ್ದರು.  ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಉನ್ನತ ಶಿಕ್ಷಣ ಕಾಲೇಜ್ ಪರಿಸರ ಕೇವಲ ಪಠ್ಯಕ್ರಮ ಗಳಿಗೆ ಮಾತ್ರ ಸೀಮಿತವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪಾಲಕರು ಗಮನಹರಿಸಬೇಕು ಹಾಗೂ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯ ಶ್ರೀ ವಸಂತ ದೇಸಾಯಿ ಅವರು ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಸಂಸ್ಥೆಯ ಸಂಯೋಜಕರಾದ ಶ್ರೀ ವ್ಹಿ  ಕೆ. ಭರಣಿ ಅವರು ಉಪಸ್ಥಿತರಿದ್ದರು. ಕುಮಾರಿ ಸ್ನೇಹ ಸೌಂಸಿ  ಸ್ವಾಗತ ಗೀತೆಯನ್ನು ಹಾಗೂ ಕುಮಾರಿ ಅನಘಾ ಹಿರೇಮಠ್ ಸಭೆಯನ್ನು ಸ್ವಾಗತಿಸಿದರು. ವಂದನಾರ್ಪಣೆಯನ್ನು ಎನ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀ ಈರಪ್ಪ ಪತ್ತಾರ ಅವರು ನೆರವೇರಿಸಿದರು. ಕುಮಾರಿ ಕವಿತಾ ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರು.

23 August, Friday 2019

12:53 pm

ಇಂದು ಪ್ರಾಚಾರ್ಯರ ಕೊಠಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಸಂಸ್ಥೆಯ ಸಂಯೋಜನಾ ಅಧಿಕಾರಿಗಳಾದ ಶ್ರೀ ವೀರಭದ್ರ ಭರಣಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು. ಸಭೆಯಲ್ಲಿ ಈ ಕೆಳಗಿನ ಅಂಶಗಳನ್ನು ಚರ್ಚಿಸಲಾಯಿತು

1.  ಕೇಂದ್ರ ಸರ್ಕಾರದ,  ಮಾನವ ಸಂಪನ್ಮೂಲ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ one student - one tree

     ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಜಾರಿಗೊಳಿಸಲು  ನಿರ್ಧರಿಸಲಾಯಿತು

2. ಈ ಕಾರ್ಯಕ್ರಮಕ್ಕೆ ಎರಡು ನೂರು ತೆಗೆದ ಸಸಿಗಳನ್ನು ಪಡೆಯುವ ಕುರಿತು ಚರ್ಚಿಸಲಾಯಿತು.

3. ಈ ಸಂದರ್ಭದಲ್ಲಿ ದುಂಡಸಿ  ಅರಣ್ಯ ವಲಯ ಅಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರ್ ಇವರಿಗೆ ಎರಡು ನೂರು                

     ತೆಗೆದ ಸಸಿಗಳನ್ನು ನೀಡುವಂತೆ ದೂರವಾಣಿಯ ಮೂಲಕ ಮನವಿ ಮಾಡಲಾಯಿತು.

4. ರಾಷ್ಟ್ರೀಯ ಸೇವಾ ಯೋಜನೆ ಹೊಸ ಕೊಠಡಿಗೆ ನೂತನ ಉಪಕರಣಗಳನ್ನು ಖರೀದಿಸುವ ಕುರಿತು ಚರ್ಚಿಸಲಾಯಿತು.

5. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರವನ್ನು      

    ಕೋರಲಾಯಿತು.

 

 

25 August, Sunday 2019

10:00 am

 


ದಿನಾಂಕ 23 ಆಗಸ್ಟ್ 2019 ಪ್ರಾಚಾರ್ಯರ ಕೊಠಡಿಯಲ್ಲಿ ನಡೆದ ಸಭೆ ಯಂತೆ ಹಾಗೂ ಚರ್ಚಿಸಿದಂತೆ ಇಂದು ನಾನು ದುಂಡಸಿ ಗ್ರಾಮಕ್ಕೆ ತೆರಳಿ ಅಲ್ಲಿನ ವಲಯ ಅರಣ್ಯ ಅಧಿಕಾರಿ ಗಳಾದ ಶ್ರೀ ಶಿವಾನಂದ ಪೂಜಾರಿ ಅವರನ್ನು ಭೇಟಿಯಾಗಿ ಅವರಿಂದ ಸುಮಾರು ಎರಡು ನೂರು ಟೀಕ್ ವುಡ್ ಸಸಿಗಳನ್ನು ಪಡೆದುಕೊಂಡೆನು.  ಆ ಟೀಕ್ ವುಡ್ ಸಸಿಗಳನ್ನು ನನ್ನ ಸ್ವಂತ ವಾಹನದಲ್ಲಿ ಧಾರವಾಡಕ್ಕೆ ತೆಗೆದುಕೊಂಡು ಬಂದು ಸಂಸ್ಥೆಯ ಆವರಣದಲ್ಲಿ ಇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜನಾ ಅಧಿಕಾರಿಗಳಾದ ಶ್ರೀ ವೀರಭದ್ರ ಭರಣಿ ಅವರು ಉಪಸ್ಥಿತರಿದ್ದರು. ಟೀಕ್ ವುಡ್ ಸಸಿಗಳನ್ನು ಸಂಸ್ಥೆಯ ಜವಾನ ರಾದ ಶ್ರೀ ಭೀಮಪ್ಪ ಅವರು ಹಾಗೂ ಇಬ್ಬರು ಮಹಿಳಾ ಸಿಬ್ಬಂದಿ ಜವಾನ ರೊಂದಿಗೆ ಸಸಿಗಳನ್ನು ಸಂಸ್ಥೆಯ ಆವರಣದಲ್ಲಿ ಇಳಿಸಲಾಯಿತು.

 

 

26 August, Monday 2019

10:30 am

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯ ಹಾಗು A.I.C.T.E ನವದೆಹಲಿ ಇವರ ನಿರ್ದೇಶನದಂತೆ  One student - one tree ಕಾರ್ಯಕ್ರಮದ ಅಂಗವಾಗಿ. ಹಿಂದಿನಿಂದ ಒಂದು ವಾರದವರೆಗೆ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಪ್ರತಿ ವಿಭಾಗದಿಂದ 25 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಇದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ಯೊಂದನ್ನು ಸಿದ್ಧಪಡಿಸಿ ಪ್ರತಿ ವಿಭಾಗಕ್ಕೆ ನೀಡಲಾಗಿದೆ ಅದರಂತೆ ಇಂದು ಸಿವಿಲ್ ವಿಭಾಗದಿಂದ 25 ಸಸಿಗಳನ್ನು ಸಂಸ್ಥೆಯ ಆವರಣ ಮತ್ತು ಹಿಂಭಾಗದಲ್ಲಿ ನೆಡಲಾಯಿತು. ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಪ್ರಾಚಾರ್ಯ ವಸಂತ್ ದೇಸಾಯಿ ಅವರು ಹಾಗೂ ಸಂಸ್ಥೆಯ ಸಂಯೋಜನಾ ಅಧಿಕಾರಿಗಳಾದ  ಶ್ರೀ ವೀರಭದ್ರ ಭರಣಿ ಅವರುಗಳು ಸಸಿ ನೆಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.  ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಗೂ ಸಿವಿಲ್ ವಿಭಾಗದ  ಮುಖ್ಯಸ್ಥರು ಹಾಗೂ ಉಪನ್ಯಾಸಕರು ಹಾಜರಿದ್ದರು. 

 

 

03 September, Tuesday 2019

07:30 am

ಇಂದು ರಾಷ್ಟ್ರೀಯ ಸೇವಾ ಯೋಜನೆ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ ಶಿಬಿರದ ಆಯ್ಕೆ ಸಮಿತಿಯ ಸದಸ್ಯ ನಾಗಿ ಆಯ್ಕೆಯಾಗಿದ್ದು ಈ ಕಾರ್ಯಕ್ರಮಕ್ಕೆ ಹಾಜರಾಗಲು ಇಂದು ಕಾರ್ಯನಿಮಿತ್ತ ಬಿಡುಗಡೆಗೊಂಡು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಾಜರಾದನು. ನಮ್ಮ  ಸಂಸ್ಥೆಯಿಂದ ನಾಲ್ಕು ವಿದ್ಯಾರ್ಥಿಗಳು ಸಹ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ನಮ್ಮ ಸಂಸ್ಥೆಯಿಂದ ಆಯ್ಕೆಯಾಗಿದ್ದರು.

  1. ಕಿರಣ್ ಲಮಾಣಿ ಮೆಕ್ಯಾನಿಕಲ್ ಅವಾಗಕಿರಣ್ ಲಮಾಣಿ ಮೆಕ್ಯಾನಿಕಲ್ ವಿಭಾಗ  5ನೇ ಸೆಮಿಸ್ಟರ.

  2. ಯಶ್ ರಾವಲ್ ಮೆಕಾಟ್ರೋನಿಕ್ಸ್ 3ನೇ  ಸೆಮಿಸ್ಟರ

  3. ಕುಮಾರಿ ಅಕ್ಷತಾ ಚಬ್ಬಿ 5ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ

  4. ಕುಮಾರಿ ಸ್ವಾತಿ ಹಿರೇಮಠ 5ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ.

 

14 September, Saturday 2019

12:00 pm

ಇಂದು ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆವರಣದಲ್ಲಿ ಶ್ರಮದಾನವನ್ನು ಹಾಗೂ ಒಂದು ದಿನದ ರಾಷ್ಟ್ರೀಯ ಸೇವಾ ಯೋಜನೆ ಸುವರ್ಣ ಮಹೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಸ್ವಯಂ ಸೇವಕ ಹಾಗೂ ಸೇವಕಿಯರ ಆಯ್ಕೆಯ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅನಿಸಿಕೆಗಳನ್ನು ಪಡೆಯಲಾಗಿ ಸ್ಪರ್ಧೆಗೆ ಸಮೂಹ ನೃತ್ಯವನ್ನು ಹಾಗೂ ಪ್ರಹಸನವನ್ನು ಮತ್ತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಗಿ ಸ್ಪರ್ಧೆಗೆ ಸಮೂಹ ನೃತ್ಯವನ್ನು ಹಾಗೂ ಪ್ರಹಸನವನ್ನು ಮತ್ತು ಮೂಕಅಭಿನಯವನ್ನು ಸಿದ್ಧಪಡಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಈ ಕೆಳಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಯಿತು. 

1. ಕುಮಾರಿ ಅಕ್ಷತಾ ಚಬ್ಬಿ 5ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ.

2. ಕುಮಾರಿ ಕವಿತಾ ಹಿರೇಮಠ್ ಐದನೇ ಕವಿತಾ ಹಿರೇಮಠ್ 5 ನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ

3. ಕುಮಾರಿ ಸ್ವಾತಿ ಹಿರೇಮಠ್ ಐದನೇ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ

4. ಕುಮಾರಿ ಸ್ನೇಹ ಪ್ರಥಮ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ

5. ಕುಮಾರಿ ಸಹನಾ ಹೊನ್ನರ್ಕುಮಾರಿ ಸಹನಾ ಹೊನ್ನದ  ಪ್ರಥಮ ಸೆಮಿಸ್ಟರ್ ಎಲೆಕ್ಟ್ರಿಕಲ್ ವಿಭಾಗ.

6. ಕುಮಾರಿ ಅನಘಾ ಹಿರೇಮಠ್ ತೃತೀಯ ಸೆಮಿಸ್ಟರ್ ಮೆಕ್ಯಾನಿಕಲ್ ವಿಭಾಗ.

7. ಕುಮಾರ್ ನಾಗರಾಜ್ ಛಬ್ಬಿ 5ನೇ ಸೆಮಿಸ್ಟರ್ ಮೆಕ್ಯಾನಿಕಲ್ ವಿಭಾಗ.

8. ಕುಮಾರ್ ಮಾಲ್ತೇಶ್ ಪ್ರಥಮ ಸೆಮಿಸ್ಟರ್ ಮೆಕಾಟ್ರೋನಿಕ್ಸ್ ವಿಭಾಗ. 

ಇವರುಗಳಿಗೆ ತಮ್ಮ ವರ್ಗ ಮುಗಿದ ನಂತರ ತಾಲೀಮು ನಡೆಸಲು ಸೂಚಿಸಲಾಯಿತು.

 

16 September, Monday 2019

12:00 pm

 ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಬಂಧ ಸ್ಪರ್ಧೆಯ ವಿಷಯ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ. ಈ ಸ್ಪರ್ಧೆಯಲ್ಲಿ ಒಟ್ಟು 62 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಪ್ರಬಂಧ ಸ್ಪರ್ಧೆಯ ಉಸ್ತುವಾರಿಯನ್ನು ಆಟೋಮೊಬೈಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿ ಯಮಕನಮರಡಿ ಅವರು ನಿರ್ವಹಿಸಿದರು. ಸಂಸ್ಥೆಯ ಗ್ರಂಥಾಲಯದಲ್ಲಿ ಈ ಪ್ರಬಂಧ ಸ್ಪರ್ಧೆಗೆ ಬರೆಯಲು ಅವಕಾಶ ಏರ್ಪಡಿಸಲಾಗಿತ್ತು.

 

 

 

17 September, Tuesday 2019

10:30 am

ಇಂದು ಸಂಸ್ಥೆಯಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಸಂಸ್ಥೆಯ ಆವರಣದಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಎಲ್ಲಾ ಅಂಗಸಂಸ್ಥೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜನತಾ ಶಿಕ್ಷಣ ಸಮಿತಿಯ ಹಣಕಾಸು ಅಧಿಕಾರಿಗಳಾದ ಡಾಕ್ಟರ್ ಅಜಿತ್ ಪ್ರಸಾದ್ ರವರು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ಲಾಸ್ಟಿಕ್ ಮುಕ್ತ ಭಾರತವನ್ನು ಮಾಡುವ ಪ್ರತಿಜ್ಞೆಯನ್ನು ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಅಂಗಸಂಸ್ಥೆಗಳ ಪ್ರಾಚಾರ್ಯರು ಬೋಧಕ ಬೋಧಕೇತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ಲಾಸ್ಟಿಕ್ ನಿಂದಾಗಿ ನಮ್ಮ ಪರಿಸರ ಹಾಳಾಗುತ್ತಿದ್ದು ನಮ್ಮ ಸಂಸ್ಥೆಯ ಆವರಣವನ್ನು ಪ್ಲಾಸ್ಟಿಕ್ ಮುಕ್ತ ಆವರಣ ವನ್ನಾಗಿ ಸಲಾಗಿದೆ ಎಂದು ಘೋಷಿಸಿದರು. ಪ್ಲಾಸ್ಟಿಕ್ ಇಗೆ ಪರ್ಯಾಯವಾದ ವಸ್ತುಗಳನ್ನು ನಾವು ಬಳಸುವ ಪ್ರತಿಭೆಯನ್ನು ಸಹ ಈ ಸಂದರ್ಭದಲ್ಲಿಅವರುವಿದ್ಯಾರ್ಥಿಗಳಿಗೆಬೋಧಿಸಿದರು.

 

18 September, Wednesday 2019

09:08 pm

 

ಇಂದು ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಸುವರ್ಣಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚರ್ಚಾ ಸ್ಪರ್ಧೆ ವಿಷಯ ಪ್ಲಾಸ್ಟಿಕ್ ಮುಕ್ತ ಇರಬೇಕು ಅಥವಾ ಬೇಡ. ಈ ಸ್ಪರ್ಧೆಯ ಉಸ್ತುವಾರಿಯನ್ನು ಆಟೋಮೊಬೈಲ್ ವಿಭಾಗದ ಮುಖ್ಯಸ್ಥರಾದ ಶ್ರೀ ರವಿ ಯಮಕನಮರಡಿ ಅವರು ಹಾಗೂ ನಿವೃತ್ತ ಕಂಪ್ಯೂಟರ್ಸಾಯನ್ಸ್ ವಿಭಾಗದ ಪ್ರಾಧ್ಯಾಪಕರಾದ ಶ್ರೀ ಸುಧೀಂದ್ರ ಕುಲಕರ್ಣಿ ಅವರು ನಿರ್ವಹಿಸಿದರು. ಈ ಸ್ಪರ್ಧೆಯಲ್ಲಿ ಒಟ್ಟು 38 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರ-ವಿರೋಧದ ಚರ್ಚೆಯೂ ಅತ್ಯಂತ ಮನಮುಟ್ಟುವಂತಿತ್ತು. ಈ ಸ್ಪರ್ಧೆಯಲ್ಲಿ ಪರವಾಗಿ ಮಾತನಾಡಿದ ಮೂರು ವಿದ್ಯಾರ್ಥಿಗಳನ್ನು ಹಾಗೂ ವಿರೋಧ ಬಣದಲ್ಲಿ ಮಾತನಾಡಿದ ಮೂರು ವಿದ್ಯಾರ್ಥಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿತ್ತು.

 

 

21 September, Saturday 2019

12:00 pm

ಇಂದು ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಶ್ರಮದಾನವನ್ನು ಹಾಗೂ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಸ್ಪರ್ಧೆಗೆ ತಯಾರಿಯನ್ನು ಮಾಡಿಕೊಂಡರು. ಈ ಸಂದರ್ಭದಲ್ಲಿ ಶ್ರಮದಾನದ ಮಹತ್ವ ವನ್ನು ವಿದ್ಯಾರ್ಥಿಗಳಿಂದ ಅನಿಸಿಕೆಯ ರೂಪದಲ್ಲಿ ಪಡೆಯಲಾಯಿತು.

 

 

22 September, Sunday 2019

01:30 pm

ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ವರ್ಷದ ಸ್ಮರಣಾರ್ಥವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪರ್ಧಾಳು ಗಳೊಂದಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಶತಾಬ್ದಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಬೆಂಗಳೂರಿನಲ್ಲಿ ಸೂಚಿಸಿದ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಲಾಯಿತು.

 

 

 

23 September, Monday 2019

07:30 am

ಇಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತೆ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ಸ್ಪರ್ಧಾಳುಗಳಿಗೆ ವರದಿ ಮಾಡಿಕೊಂಡಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಬೇರೆಬೇರೆ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸಹ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ  ಕುಲಪತಿಗಳು ಉದ್ಘಾಟಿಸಿದರು, ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಾಂತಿಯ ಕೇಂದ್ರದ ನಿರ್ದೇಶಕರಾದ ಶ್ರೀ ನರಸಿಂಹಯ್ಯ ಖಾದ್ರಿ ಅವರು ಹಾಗೂ ರಾಜ್ಯ ಎನ್ಎಸ್ಎಸ್ ಕೋಶದ ಎನ್ಎಸ್ಎಸ್ ಸಂಪರ್ಕದ ಕಾರ್ಯಗಳಾದ ಶ್ರೀ ಗಣನಾಥ ಶೆಟ್ಟಿ ಅವರು ಹಾಗೂ ರಾಜ್ಯ ವಿಸ್ತರಣಾ ಅಧಿಕಾರಿ ಶ್ರೀಮತಿ ಪೂರ್ಣಿಮಾ ಜೋಗಿನ  ಮೇಡಂ ಅವರು ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳು ಉಪಸ್ಥಿತರಿದ್ದರು. ತಾಂತ್ರಿಕ ಶಿಕ್ಷಣ  ನಿರ್ದೇಶನಾಲಯವನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ತಮವಾದ ಪ್ರದರ್ಶನವನ್ನು ನೀಡಿ ಉತ್ತಮ ಮೆಚ್ಚುಗೆಯನ್ನು ಗಳಿಸಿದರು. ಸ್ಪರ್ಧೆಯ ನಂತರ ಸ್ಪರ್ಧಾಳು ಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು ಹಾಗೂ ಅಂದೇ ಸಾಯಂಕಾಲ ಜೋಧಪೂರ್ ಎಕ್ಸ್ಪ್ರೆಸ್ ರೈಲಿನ ಮೂಲಕ ಧಾರವಾಡಕ್ಕೆ ಪ್ರಯಾಣ ಬೆಳೆಸಿ ಮರುದಿನ ಧಾರವಾಡಕ್ಕೆ ಆಗಮಿಸಿದವು.

 

26 September, Thursday 2019

03:30 pm

ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಇಂದು ನಮ್ಮ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ನಮ್ಮ ಸಂಸ್ಥೆಯ ಕಚೇರಿಯ ಸಿಬ್ಬಂದಿ ಅವರಾದ ಶ್ರೀಮತಿ ಬಂಕಾಪುರ ರವರು ಹಾಗೂ ಶ್ರೀಮತಿ ವಿದ್ಯಾ ಹಾಗೂ ಗ್ರಂಥಾಲಯ ಬಗದ ಶ್ರೀಮತಿ ರತ್ನಾ  ಬಳ್ಳಾರಿ ಅವರು ಆಗಮಿಸಿದ್ದರು.

 

 

27 September, Friday 2019

03:30 pm

ಇಂದು ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಅಂಗವಾಗಿ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯ ನಿರ್ಣಾಯಕರಾಗಿ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರತಿಭಾ ಅವರು ಹಾಗೂ ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ವೀಣಾ ಹಂಪಿಹೊಳಿ ಅವರು ಆಗಮಿಸಿದ್ದರು.  ಸ್ಪರ್ಧೆಯ ನಂತರ ಎಲ್ಲಾ ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ರೂ ಸಂಖ್ಯೆ ಮೂರರಲ್ಲಿ ಸಭೆ ಕರೆಯಲಾಗಿತ್ತು. ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಚರಿಸುವ ಕುರಿತು ರೂಪರೇಷೆಗಳನ್ನು ಚರ್ಚಿಸಲಾಯಿತು.

 

 

 

01 October, Tuesday 2019

10:30 am

ಇಂದು ಸಂಸ್ಥೆಯಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆಯ ಪ್ರಯುಕ್ತ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಮಹಾತ್ಮ ಗಾಂಧೀಜಿ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರವನ್ನು ಶ್ರೀಧರ್ಮಸ್ಥಳ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ , ರಕ್ತ ಭಂಡಾರ ಮತ್ತು ಜಿಲ್ಲಾ ಆಸ್ಪತ್ರೆ ಧಾರವಾಡ ರಕ್ತ ಬಂಡಾರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಲಾಯಿತು. ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಗೂ ಇತರೆ ವಿಭಾಗಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನವನ್ನು ಮಾಡಿದರು ಸುಮಾರು 85 ಯೂನಿಟ್ ಕ್ರಾಸ್ ಟು ಯೂನಿಟ್ ರಕ್ತವನ್ನು ವಿದ್ಯಾರ್ಥಿಗಳು ದಾನ ಮಾಡಿದರು. ವಿದ್ಯಾರ್ಥಿಗಳ ಅಷ್ಟೇ ಅಲ್ಲದೆ ಸಂಸ್ಥೆಯ ಉಪನ್ಯಾಸಕರುಗಳು ರಕ್ತದಾನ ಮಾಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಭಾಗವಹಿಸಿದರು. ರಕ್ತದಾನ ಶಿಬಿರದ ನಂತರ ಸ್ವಯಂಸೇವಕರು ಅಕ್ಟೋಬರ್ 2ರಂದು ಆಚರಿಸಲು ಇರುವ ಮಹಾತ್ಮ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಕಾರ್ಯಕ್ರಮದ ರೂಪರೇಷೆಗಳನ್ನು ಹಾಗೂ ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಿರುವ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಬೀದಿ ನಾಟಕಕ್ಕೆ ತಯಾರಿ ನಡೆಸಿದರು.

 

 

02 October, Wednesday 2019

09:00 am

ಇಂದು ಸಂಸ್ಥೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ವಸಂತ ದೇಸಾಯಿಯವರು ಹಾಗೂ ಸಂಸ್ಥೆಯ ಸಂಯೋಜನಾ ಅಧಿಕಾರಿಗಳಾದ ಶ್ರೀ ವೀರಭದ್ರ ಭರಣಿ ಅವರು ಹಾಗೂ ಸಂಸ್ಥೆಯ ಪ್ರಾಕ್ಟರ ಶ್ರೀ ವ್ಹಿ.  ಸಿ. ಹಿರೇಮಠ ಅವರು ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಶ್ರೀ ವೆಂಕಟೇಶ್ ಪೂಜಾರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸ್ವಾಗತ ಗೀತೆಯನ್ನು ಗಾಂಧೀಜಿ ಅವರ ಭಜನೆಯ ಮೂಲಕ ಕುಮಾರಿ ಅನಘಾ ಹಿರೇಮಠ್ ಅವರು ನೆರವೇರಿಸಿದರು. ಸ್ವಾಗತವನ್ನು ಕುಮಾರ್ ಯಶ್ ರಾವಲ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸಹನಾ ಹೊನ್ನ ಹಾಗೂ ಸ್ನೇಹ ನಿರ್ವಹಿಸಿದರು. ವಂದನಾರ್ಪಣೆಯನ್ನು ಕುಮಾರ್ ನಾಗರಾಜ್ ಛಬ್ಬಿ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಸಂಸ್ಥೆಯ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತ ಅಭಿಯಾನದ ಕುರಿತಾದ ಬೀದಿ ನಾಟಕವನ್ನು ಪ್ರದರ್ಶನ ಮಾಡಿದರು. ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಿಶೇಷ ಆಹ್ವಾನದ ಮೇರೆಗೆ, ಸಂಜೆ ಹುಬ್ಬಳ್ಳಿ ನಗರದ ಗ್ಲಾಸ್ ಹೌಸ್ ನಲ್ಲಿ ಪ್ಲಾಸ್ಟಿಕ್ ಮುಕ್ತ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಅಲ್ಲಿ ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ವಸ್ತುಪ್ರದರ್ಶನವನ್ನು ನೋಡಲಾಯಿತು.

 

07 October, Monday 2019

09:26 am

ಇಂದು ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಸ್ವಚ್ಛತಾ ಹಿ ಸೇವಾ ಅಭಿಯಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳೊಂದಿಗೆ ಶ್ರಮದಾನವನ್ನು ಸಂಸ್ಥೆಯ ಆವರಣದಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ನೆರವೇರಿಸಿದರು ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ವಸಂತ್ ದೇಸಾಯಿ ಅವರು ವಿದ್ಯಾರ್ಥಿಗಳು ಸ್ವಚ್ಛತೆ ನಮ್ಮ ಜೀವನದ ಅವಿಭಾಜ್ಯ ಅಂಗ ಹಾಗೂ ದಿನನಿತ್ಯದ ಕರ್ಮ ವಾಗಬೇಕೆಂದು ಕರೆ ನೀಡಿದರು.

 

 

12 October, Saturday 2019

10:00 am

ಇಂದು ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಯೋಜನಾಧಿಕಾರಿಗಳಾದ ಡಾಕ್ಟರ್ ಗುರುಪ್ರಸಾದ್ ಹೂಗಾರ್ ಅವರು ಆಗಮಿಸಿದ್ದರು. ಇನ್ನೋರ್ವ ಅತಿಥಿಗಳಾಗಿ ದುಂಡಸಿ ಅರಣ್ಯ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರಿಇನ್ನೋರ್ವ ಅತಿಥಿಗಳಾಗಿ ದುಂಡಸಿ ಅರಣ್ಯ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರ ಅವರು ಆಗಮಿಸಿದ್ದರು. ಸಮಾರಂಭದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಪ್ರಾಚಾರ್ಯ ವಸಂತ್ ದೇಸಾಯಿ ಅವರು ಹಾಗೂ ಸಂಯೋಜನಾ ಅಧಿಕಾರಿಗಳಾದ ಶ್ರೀ ವೀರಭದ್ರ ಭರಣಿ ಅವರು ಹಾಗೂ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಶ್ರೀ ವೆಂಕಟೇಶ್ ಪೂಜಾರಿ ಅವರು ಹಾಗೂ ನಮ್ಮ ಸಂಸ್ಥೆಯ ಪ್ರಾಕ್ಟರ್ ಆದ ಶ್ರೀ ಬಿ ಸಿ ಹಿರೇಮಠ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ನ್ರತ್ಯದ ಮೂಲಕ ಪ್ರಾರಂಭಿಸಲಾಯಿತು ಸ್ವಾಗತ ಗೀತೆಯನ್ನು ಕುಮಾರಿ ಅನಗಾ ಹಿರೇಮಠ್ ಅವರು ನಡೆಸಿಕೊಟ್ಟರು. ಸ್ವಾಗತವನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕ ಎರಡರ ಅಧಿಕಾರಿಗಳಾದ ಶ್ರೀ ವಸಂತ ಐಹೊಳೆ ಅವರು ನೆರವೇರಿಸಿದರು. ಈ ಸಮಾರಂಭದಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಹಿರಿಯ ಉಪನ್ಯಾಸಕರುಗಳಾದ ಶ್ರೀ ವಿಠ್ಠಲ ಮ್ಯಾಗಿನ ಮನಿ ಸಿವಿಲ್  ವಿಭಾಗ. ಶ್ರೀ ರಾಜಕುಮಾರ್ ಜೋಗುಳೆ, ಶ್ರೀ ಗಣಪತಿ ಜಗದ ಮೆಕ್ಯಾನಿಕಲ್ ವಿಭಾಗ, ಹಾಗೂ ಎಲೆಕ್ಟ್ರಿಕಲ್ ವಿಭಾಗದ ಶ್ರೀ ಮನೋಹರ್ ಗೋವಿಂದರೆಡ್ಡಿ ಅವರನ್ನು ಈ ಸಂದರ್ಭದಲ್ಲಿ ಅವರುಗಳು ರಾಷ್ಟ್ರೀಯ ಸೇವಾ ಯೋಜನೆ ಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸುತ್ತಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಗಳಾದ ಡಾಕ್ಟರ್ ಗುರುಪ್ರಸಾದ್ ಹೂಗಾರ್ ಅವರು ವಿದ್ಯಾರ್ಥಿಗಳು ಕೇವಲ ಶ್ರಮದಾನಕ್ಕೆ ಮಾತ್ರ ಸೀಮಿತವಾಗಿದೆ ಇತರ ಪಠ್ಯೇತರ ಚಟುವಟಿಕೆಗಳ ಮೂಲಕ ಭಾರತದ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಇನ್ನೂ ಬೆಳೆಸಬೇಕು ಮತ್ತು ಅದರ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಉದಾಹರಣೆಗಳ ಮೂಲಕ ವಿವರವನ್ನು ನೀಡಿದರು. ಇನ್ನೋರ್ವ ಅತಿಥಿಗಳಾದ ದುಂಡಸಿ ಅರಣ್ಯ ಅಧಿಕಾರಿಗಳಾದ ಶ್ರೀ ಶಿವಾನಂದ ಪೂಜಾರ್ ಅವರು ವಿದ್ಯಾರ್ಥಿಗಳು ಪರಿಸರ ಕಾಳಜಿಯೊಂದಿಗೆ ಅದರ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು. ನಂತರ ಈ ಸಮಾರಂಭದ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಸ್ಮರಣಾರ್ಥವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಕುಮಾರ್ ಕಿರಣ್ ಲಮಾಣಿ ಅವರು ನಡೆಸಿಕೊಟ್ಟರು

 

14 October, Monday 2019

11:30 am

ಇಂದು ರಾಷ್ಟ್ರೀಯ ಸೇವಾ ಯೋಜನೆ ಗಣರಾಜ್ಯೋತ್ಸವ ಪಥ ಸಂಚಲನದ ದಕ್ಷಿಣ ವಿಭಾಗಿಯ ಪೂರ್ವಭಾವಿ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಪ್ರಾಂತೀಯ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಂಡನು. ಶಿಬಿರವು ದಿನಾಂಕ 16 ಅಕ್ಟೋಬರ್ 2019 ರಿಂದ 25 ಅಕ್ಟೋಬರ್ 2019 ರವರೆಗೆ ತಮಿಳುನಾಡಿನ, ಪ್ರತಿಷ್ಠಿತ ನ್ಯಾಷನಲ್ ಕಾಲೇಜ್, ತಿರುಚಿ ಇಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯ ರೊಂದಿಗೆ ಶಿಬಿರದಲ್ಲಿ ನಾನು ಪಾಲ್ಗೊಳ್ಳಲು ಇಂದು ಬೆಂಗಳೂರಿಗೆ ಆಗಮಿಸಿದೆನು.

 

 

 

 

15 October, Tuesday 2019

11:53 pm

ಇಂದು ಕುಮಾರಕೃಪಾ ರಸ್ತೆಯ ಗಾಂಧಿಭವನದಲ್ಲಿ ದಕ್ಷಿಣ ಪ್ರಾಂತೀಯ ಗಣರಾಜ್ಯೋತ್ಸವ ಪಥ ಸಂಚಲನದ ಪೂರ್ವಭಾವಿ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲ ಶಿಬಿರಾರ್ಥಿಗಳು ಇಲ್ಲಿ ವರದಿ ಮಾಡಿಕೊಂಡರು. ಈ ಶಿಬಿರದಲ್ಲಿ ಪಾಲ್ಗೊಳ್ಳಲು ಸಹ ಕಾರ್ಯಕ್ರಮ ಅಧಿಕಾರಿಗಳಾಗಿ ಸಿರಸಿ ಫಾರೆಸ್ಟ್ರಿ ಕಾಲೇಜಿನ ಡಾಕ್ಟರ್ ರಮೇಶ್ ರಾಥೋಡ್ ಅವರು ಹಾಗೂ ಬೆಂಗಳೂರಿನ ಮಹಿಳಾ ವಿದ್ಯಾಲಯದಲ್ಲಿ ಡಾಕ್ಟರ್ ಜ್ಯೋತಿ ಮೇಡಂ ಅವರು ಅವರು ಸಹ ಇಲ್ಲಿ ವರದಿ ಮಾಡಿಕೊಂಡರು. ಮಧ್ಯಾಹ್ನ ಗಾಂಧಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ಕೇಂದ್ರದ ಅಧಿಕಾರಿಗಳಾದ ಶ್ರೀ ಸಂತೋಷ್ ಅವರು ಹಾಗೂ ರಾಜ್ಯ ವಿಸ್ತರಣಾಧಿಕಾರಿಗಳ ಆದ ಶ್ರೀಮತಿ ಪೂರ್ಣಿಮಾ ಜೋಗಿ ಅವರು ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾ ಅಧಿಕಾರಿಗಳಾದ ಡಾಕ್ಟರ್ ಸಂತೋಷ್ ಹಾನಗಲ್ ಅವರು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿದರು. ಅಂದು ಸಂಜೆ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಎರಡು ಪ್ರತ್ಯೇಕ ಬಸ್ಗಳಲ್ಲಿ ತಿರುಚಿ ಗೆ ಪ್ರಯಾಣ ಬೆಳೆಸಲಾಯಿತು. ವಿವಿಧ ವಿಶ್ವವಿದ್ಯಾಲಯಗಳಿಂದ 33 ಗಂಡುಮಕ್ಕಳು ಹಾಗೂ 33 ಹೆಣ್ಣುಮಕ್ಕಳು ಈ ಶಿಬಿರದಲ್ಲಿ ಪಾಲ್ಗೊಳ್ಳಲು ನಮ್ಮೊಂದಿಗೆ ಪ್ರಯಾಣ ಬೆಳೆಸಿದರು.

16 October, Wednesday 2019

11:58 pm

ಇಂದು ದಕ್ಷಿಣ ಪ್ರಾಂತೀಯ ಗಣರಾಜ್ಯೋತ್ಸವ ಪಥಸಂಚಲನ ಪೂರ್ವಭಾವಿ ಆಯ್ಕೆ ಶಿಬಿರ, ತಮಿಳುನಾಡಿನ ಪ್ರತಿಷ್ಠಿತ ನ್ಯಾಷನಲ್ ಕಾಲೇಜ್ ಇಲ್ಲಿ ಕರ್ನಾಟಕದ ತಂಡದೊಂದಿಗೆ ಇಂದು ವರದಿ ಮಾಡಿಕೊಂಡೆವು

 

 

 

31 October, Thursday 2019

09:31 am

ಇಂದು ನಮ್ಮ ಸಂಸ್ಥೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವು ಕಬ್ಬೂರ್ ಮಂಟಪದಲ್ಲಿ ನೆರವೇರಿತು. ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಇತರ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಪ್ರಾಚಾರ್ಯರು ಅವರು ಎಲ್ಲರಿಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಬೋಧಿಸಿದರು. ನಂತರ ಮಾತನಾಡಿದ ಅವರು ಭಾವೈಕ್ಯತೆ ನಮ್ಮ ಇಂದಿನ ಅವಶ್ಯಕತೆಯಾಗಿದೆ ಭಾವೈಕ್ಯತೆಯಿಂದ ಭಾರತ ನಿರ್ಮಾಣವಾಗಿದೆ ಎಂಬ ಸಂದೇಶವನ್ನು ಅವರು ವಿದ್ಯಾರ್ಥಿಗಳಿಗೆ ನೀಡಿದರು. ಸಂಸ್ಥೆಯ ಸಂಯೋಜನೆ ಅಧಿಕಾರಿಗಳಾದ ಶ್ರೀ ವೀರಭದ್ರ ಭರಣಿ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ  ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

 

 

01 November, Friday 2019

08:36 am

ಇಂದು ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಪ್ರಭಾರಿ ಪಾಚ ಪ್ರಾಚಾರ್ಯರಾದ ಶ್ರೀ ವಿ. ಎಂ. ಹರಿಹರ ಸರ್ ಅವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾತ್ರ ಭಾಷೆ ನಾಡು ನುಡಿಯ ರಕ್ಷಣೆಗಾಗಿ ನಾವೆಲ್ಲರೂ ಅತ್ಯಂತ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಕನ್ನಡಭಾಷೆಯು ಅತ್ಯಂತ ಪ್ರಾಚೀನ ಮತ್ತು ಸಾಹಿತ್ಯ ಲೋಕಕ್ಕೆ ಅಭುತ್ಪೂರ್ವ ಕೊಡುಗೆಗಳನ್ನು ನೀಡಿದೆ ಸಾಹಿತಿಗಳು ಈ ನಾಡು ನುಡಿಯ ಸೇವೆಯನ್ನು ಅದ್ಭುತವಾಗಿ ದೇಶದಲ್ಲೆಡೆ ಪಸರಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಖ್ಯಾತ ಸಾಹಿತಿಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರು ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

26 November, Tuesday 2019

08:42 am

ಇಂದು ಸಂಸ್ಥೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ವನ್ನು ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯ ವಸಂತ್ ದೇಸಾಯಿಯವರು ಹಾಗೂ ಸಂಸ್ಥೆಯ ಸಂಯೋಜನಾ ಅಧಿಕಾರಿಗಳಾದ ಶ್ರೀ ವೀರಭದ್ರ ಬರಣಿ ಹಾಗೂ ಸಮಸ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯರು ದೇಶದ ಸಮಾನತೆಗಾಗಿ ಹಾಗೂ ಸಂವಿಧಾನದ ಮೂಲಕ ಎಲ್ಲ ವರ್ಗಗಳ ಜನರನ್ನು ಒಂದಾಗಿಸಿದ್ದು. ಸಂವಿಧಾನದ ಆಶೋತ್ತರಗಳ ಅಂತೆ ನಾವು ನಮ್ಮ ಕಾರ್ಯಶೈಲಿ ಗಳನ್ನು ಹಾಗೂ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವ ಅಗತ್ಯ ಇದೆ ಎಂದು ಅವರು ಕರೆ ನೀಡಿದರು.

 

18 December, Wednesday 2019

10:30 am

ಇಂದು ನಮ್ಮ ಸಂಸ್ಥೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ವನ್ನು ಆಯೋಜಿಸುವ ಕುರಿತು ಪೂರ್ವಭಾವಿಯಾಗಿ ಕಮಲಾಪುರ ಹಾಗೂ ಗ್ರಾಮಗಳಿಗೆ ಹಾಗೂ ಮಂಡಿಹಾಳ ಗ್ರಾಮಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುಗದ್ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಬಸವರಾಜ್ ಕಲಕೇರಿ ಅವರನ್ನು ಭೇಟಿಯಾಗಿ ನಮ್ಮ ಕಾರ್ಯಗಳನ್ನು ವಿವರಿಸಿ ಅವರ ಸೂಕ್ತ ಸಹಾಯ ಸಹಕಾರವನ್ನು ಪಡೆಯಲಾಯಿತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಬಸವರಾಜ್ ಅವರನ್ನು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ದೇವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು. ನಂತರ ದಡ್ಡಿ ಕಮಲಾಪುರ ಸಸ್ಯ ಚೇತನ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್ ವಿಭಾಗದ ಕಮಿಷನರ್ ಆದ ಶ್ರೀ ಎನ್ ಎಂ ಅವರನ್ನು ಭೇಟಿಯಾಗಿ ವಸತಿ ವ್ಯವಸ್ಥೆಗೆ ಸೂಕ್ತ ಸಹಕಾರ ನೀಡುವಂತೆ ಕೋರಲಾಯಿತು. ಅದೇ ರೀತಿ ಅಡುಗೆ ಮಾಡುವ ಶ್ರೀಮತಿ ಜಯಮ್ಮ ಬಡಿಗೇರ್ ಅವರನ್ನು ಭೇಟಿಯಾಗಿ 100 ವಿದ್ಯಾರ್ಥಿಗಳಿಗೆ ಬೇಕಾಗುವ ಅಡುಗೆ ಪಾತ್ರೆ ಪಗಡೆ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನನ್ನ ಜೊತೆ ಸಂಸ್ಥೆಯ ಎನ್ಎಸ್ಎಸ್ ವಿದ್ಯಾರ್ಥಿಗಳಾದ ಕುಮಾರ್ ಸೋಮಶೇಖರ್, ಪ್ರಸನ್ನಕುಮಾರ್, ಕಿರಣ್ ಲಮಾಣಿ ಆಗಮಿಸಿದ್ದರು.

 

11 January, Saturday 2020

08:56 am

ದಿನಾಂಕ 11 ಜನೆವರಿ 2020 ರಿಂದ 17 ಜನೆವರಿ 2020 ರ ವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಈ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಬಿರದಲ್ಲಿ ಅತ್ಯಂತ ಯಶಸ್ವಿಯಾಗಿ ಶಿಸ್ತುಬದ್ಧವಾಗಿ ಭಾಗವಹಿಸಿ ಸಂಸ್ಥೆಗೆ ಆಗಮಿಸಿದರು.

1. ಕುಮಾರಿ ಕವಿತಾ ಹಿರೇಮಠ್, ಎಲೆಕ್ಟ್ರಿಕಲ್ ವಿಭಾಗದ ಐದನೇ ಸೆಮಿಸ್ಟರ್

2. ಅಕ್ಷತಾ ಚಪ್ಪಿ ಎಲೆಕ್ಟ್ರಿಕಲ್ 5ನೇ ಸೆಮಿಸ್ಟರ್, 

3. ಭಾರತ್ ಎಲೆಕ್ಟ್ರಿಕಲ್ 5ನೇ ಸೆಮಿಸ್ಟರ್, 

4. ಕಾರ್ತಿಕ್ ಎಲೆಕ್ಟ್ರಿಕಲ್ 5ನೇ ಸೆಮಿಸ್ಟರ್, 

5. ನಾಗರಾಜ್ ಚಬ್ಬಿ ಮೆಕ್ಯಾನಿಕಲ್ 5ನೇ ಸೆಮಿಸ್ಟರ್ಮೆಕ್ಯಾನಿಕಲ್

6. ಪ್ರಸನ್ನಕುಮಾರ್ ಮೆಕ್ಯಾನಿಕ್ ನಾಲ್ಕನೇ ಸೆಮಿಸ್ಟರ್, 

7. ಮಾಲ್ತೇಶ್ ಮೆಕಾಟ್ರೋನಿಕ್ಸ್ ಎರಡನೇ ಸೆಮಿಸ್ಟರ್.

 

 

13 January, Monday 2020

09:03 am

ದಿನಾಂಕ 14 ಜನವರಿ 2020 ರಿಂದ 27 ಜನವರಿ 2020 ರವರೆಗೆ ಬೆಂಗಳೂರಿನ ಬಿ ಎಂ ಎಸ್ ಟಿ ನಲ್ಲಿ ನಡೆಯುವ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪಥಸಂಚಲನ ಶಿಬಿರದ ತರಬೇತಿ ಅಧಿಕಾರಿಯಾಗಿ ನಾನು ಆಯ್ಕೆಯಾಗಿ ಇರುತ್ತೇನೆ. ಈ ಪಥಸಂಚಲನ ಶಿಬಿರಕ್ಕೆ ನಮ್ಮ ಸಂಸ್ಥೆಯಿಂದ

1. ಕುಮಾರ್ ಕಿರಣ್ ಲಮಾಣಿ 5ನೇ ಸೆಮಿಸ್ಟರ್ ಮೆಕ್ಯಾನಿಕಲ್ ಹಾಗೂ

2. ಕುಮಾರ್ ಯಶ್ ರಾವಲ್ ಮೆಕಾಟ್ರೋನಿಕ್ಸ್ ವಿಭಾಗ ಎರಡನೇ ಸೆಮಿಸ್ಟರ್

ಅವರು ಸಹ ಆಯ್ಕೆಯಾಗಿದ್ದು ಹೆಮ್ಮೆಯ ವಿಷಯವಾಗಿದೆ. ಈ ಶಿಬಿರದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಸುಮಾರು 66 ವಿದ್ಯಾರ್ಥಿಗಳು ಸಹ ಆಯ್ಕೆಯಾಗಿ ಆಗಮಿಸುತ್ತಿದ್ದಾರೆ. ಈ ಶಿಬಿರಕ್ಕೆ ಹಾಜರಾಗಲು ಇಂದು ಈ ಶಿಬಿರಕ್ಕೆ ಹಾಜರಾಗಲು ಇಂದು ಸಂಸ್ಥೆಯ ದೈನಂದಿನಕರ್ತವ್ಯದಿಂದ ಬಿಡುಗಡೆ ಆಗಿರುತ್ತೇನೆ.. ಈ ಶಿಬಿರದ ಪಥಸಂಚಲನ ಜನವರಿ 26 ರಂದು ಬೆಂಗಳೂರು ನಗರದ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ನಡೆಯಿತು. ನಮ್ಮ ತಂಡವು ದ್ವಿತೀಯ ಸ್ಥಾನವನ್ನು ಈ ಪಥಸಂಚಲನದಲ್ಲಿ ಪಡೆದು ಕೊಂಡಿತು.

 

 

25 January, Saturday 2020

09:13 am

ಇಂದು ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ಮತದಾರರ ಪ್ರತಿಜ್ಞಾ ವಿಧಿ ಬೋಧನೆ ಕಾರ್ಯಕ್ರಮವನ್ನು ಕಬ್ಬೂರು ಮಂಟಪದ ಮುಂಭಾಗದಲ್ಲಿ ಎಲ್ಲ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಎಲ್ಲ ಉಪನ್ಯಾಸಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ವಸಂತ ದೇಸಾಯಿ ಅವರು ಎಲ್ಲ ವಿದ್ಯಾರ್ಥಿಗಳಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಯುವ ಮತದಾರರ ಪ್ರತಿಜ್ಞಾವಿಧಿ ಬೋಧಿಸಿ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಹಾಗೂ ಎಲ್ಲರೂ ತಪ್ಪದೆ ಮತದಾನ ಮಾಡಬೇಕೆಂದು ಈ ಸಂದರ್ಭದಲ್ಲಿ ಅವರು ಕರೆ ನೀಡಿದರು. ಮತದಾನ ಮಾಡುವುದು ಎಲ್ಲರ ಆದ್ಯ ಪ್ರಥಮ ಕರ್ತವ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಎಲ್ಲರಿಗೂ ಕರೆ ನೀಡಿದರು. ಸಂಸ್ಥೆಯ ಘಟಕ ಎರಡರ ಕಾರ್ಯಕ್ರಮ ಅಧಿಕಾರಿ ಶ್ರೀ ವಸಂತ ಹೊಳೆ ಅವರು ಈ ಕಾರ್ಯಕ್ರಮವನ್ನು ನೆರವೇರಿಸಿದರು.

 

bottom of page